Wednesday, July 30, 2008

ಮನದಾಳದಿಂದ...

ಬರೆಯುವ ತುಡಿತ ಮೊದಲೇ ಇತ್ತು. ಓದಿದ್ದು, ಕಂಡು, ಕೇಳಿದ್ದರ ಬಗ್ಗೆ ಅದು ಹೀಗ್ಯಾಕಾಗಿದೆ?, ಛೆ...ಹೀಗಿದ್ದರೆ ಚೆನ್ನಾಗಿತ್ತಲ್ವಾ ಹೀಗೆ...ನೂರಾರು ಕಲ್ಪನೆಗಳು ಮನದಾಳದಲ್ಲಿ ಬಂದು ಹೋಗುತ್ತಿದ್ದವು. ಇಷ್ಟಾದರೂ ಮನದೊಳಿಗನ ಮಾತಿಗೆ ಅಕ್ಷರ ರೂಪ ಕೊಡಲು ಸಾಧ್ಯವಾಗಲೇ ಇಲ್ಲ. ಇದರಿಂದ ಎಲ್ಲೋ ಒಂದು ಕಡೆ ಏನನ್ನೋ ಕಳೆದುಕೊಳ್ಳುತ್ತಿರುವ ಭಾವ ನನ್ನನ್ನು ಕಾಡುತ್ತಲೇ ಇತ್ತು. ನನ್ನೊಳಗಿನ ಸೋಂಬೇರಿ ಮನಸ್ಸು, ವೃತ್ತಿ ಬದುಕು ಇದಕ್ಕೆಲ್ಲಾ ಕಾರಣ.
ಮೊನ್ನೆ,ಮೊನ್ನೆ ನನ್ನೊಳಗಿನ ಸೋಂಬೇರಿ ಮನಸ್ಸಿಗೆ ಕ್ಲಾಸ್ ತೆಗೆದುಕೊಂಡಿದ್ದೇನೆ. ಗದರಿಸಿ ಸುಮ್ಮನಾಗಿಸಿದ್ದೇನೆ. ಯಾವತ್ತೂ ಮೌನಿಯಾಗಿಯೇ ಇರುತ್ತಿದ್ದ ನನ್ನ ಹೊಸ ಅವತಾರ ನೋಡಿ ಅವನೂ ಗಪ್‌ಚುಪ್ ಆಗಿದ್ದಾನೆ. ಕೆಲ ದಿನಗಳಿಂದ ಇದ್ದಾನೋ ಇಲ್ವೋ ಅಂಥ ನನ್ಗೇ ಅನುಮಾನ ಬರೋ ಹಾಗೆ ಇದ್ದುಬಿಟ್ಟಿದ್ದಾನೆ. ವೃತ್ತಿಬದುಕು ನನಗೆ ಬೇಕೆನಿಸಿದ್ದನ್ನು ಬರೆಯಲು ಬಿಡುತ್ತಿರಲಿಲ್ಲ. ಹಾಗಂಥ ಅದಕ್ಕೆ ಗದರುವ ಹಾಗಿಲ್ಲ. ಹೊಟ್ಟೆತುಂಬಿಸುತ್ತಿದೆ. ಆದ್ದರಿಂದ ನಾನೇ ಒಂದಷ್ಟು ಸಮಯ ಹೊಂದಿಸಿಕೊಳ್ಳುವ ಪ್ರಯತ್ನ ಮಾಡಿಕೊಂಡಿದ್ದೇನೆ. ಇನ್ನಾದ್ರೂ ಒಂದಷ್ಟು ಭಾವನೆಗಳಿಗೆ ಅಕ್ಷರ ರೂಪಕೊಡಬಹುದು ಅನಿಸ್ತಾ ಇದೆ. ಅದಕ್ಕೆ ‘ನನ್ನ ಬೆಟ್ಟ’ದ ಮೂಲಕ ನಿಮ್ಮ ಮುಂದೆ ಬಂದಿದ್ದೇನೆ. ಇಲ್ಲಿ ನನ್ನ ನೋವು, ನಲಿವು ಕಂಡು,ಕೇಳಿದ ವಿಚಾರ ಕಾಣಿಸಿಕೊಳ್ಳಲಿದೆ.
ಎಷ್ಟಾದರು ಇದು ನನ್ನ ಕಲ್ಪನೆ ಕೂಸು. ನಿಮಗೆ ಇಷ್ಟವಾಗುತ್ತೋ ಇಲ್ವೊ ಗೊತ್ತಿಲ್ಲ. ಇಷ್ಟವಾದ್ರೆ ಬೆನ್ನುತಟ್ಟಿ. ಪ್ರೀತಿ ಇರಲಿ..