Wednesday, November 19, 2008

ಒಂದಿನಿತು ಪ್ರೀತಿಗೆ ...


ಒಂದಿನಿತು ಪ್ರೀತಿಗೆ ನಾ ಸೋತು ಬಂದೆ ನನ್ನೆದೆಯ ಬಾಗಿಲು ನಿನಗಾಗಿ ತೆರೆದು ನಿಂತೆ ತೆರೆದಿದ್ದ ಬಾಗಿಲು ನೀ ನೋಡಲಿಲ್ಲ ನನ್ನೆದೆಯ ಗಾನ ನೀ ಕೇಳಲಿಲ್ಲ ಯಾರ್ಯಾರೋ ಬಂದರು ತೆರೆದ ಬಾಗಿಲು ಕಂಡು ನಾ ಮಾತ್ರ ಮುಚ್ಚಿದೆ ನೀ ಬರುವೆಯೆಂದು ...

Monday, November 17, 2008

ಹರಡಿ ಬಿದ್ದಿದೆ ಹಾದಿಯಲಿ...


ನಾನು ಮರಳಿ ಬರಬೇಕೆಂದು ಬಯಸಿರಲಿಲ್ಲ
ರೆಕ್ಕೆ ಇತ್ತು ತಾನೆ ಆಕಾಶದೆತ್ತರಕೆ ಹಾರಲು
ಹದಿಎನೋ ಮುಳ್ಳಿನದೇ
ಕನಸು ಇತ್ತು ಹೆಣೆಯುತ್ತ ಸಾಗಲು
ಆದರೆ ಅದೇನಾಯಿತೋ ರೆಕ್ಕೆ ಬಡಿಯುವ ಶಕ್ತಿಯೇ ಇಲ್ಲವಾಗಿದೆ
ಕೊನೆಯಿಲ್ಲದ ಹಾದಿಯಲ್ಲಿ ಸಾಗಿ ...
**********
ಒಂದಲ್ಲ ಎರಡಲ್ಲ ಸಾವಿರ ಸಾವಿರ ಜನ
ಬಿಸಿಲ ಕುದುರೆಯೇರಿದ ಅವರಿಗೆ ಬೇರೆಲ್ಲ ಗೌಣ
ಬೆರಗಾಗಿದ್ದೆ ನಾ ಒಂದರೆಕ್ಷಣ
ಅಬ್ಬಬ್ಬ ... ಅದೇನು ಛಲ
ಎದುರು ಸಿಕ್ಕ ಬಂಡೆಯ ಅರೆಕ್ಷಣದಿ ಪುದಿಮಾದಬಲ್ಲ ಬಲ
************
ಹಾರುತ್ತ ನಲಿಯುತ್ತ ಮುಂದೆ ಹೋದಂತೆಲ್ಲ
ಇದೇನಾ... ಆ ಮುಖ ಇದೇನಾ ಆ ಗುರಿಯೇದೆಗಿನ ಸುಖ
ನೋವಿಲ್ಲ ನಲಿವಿಲ್ಲ ಆ ಮೊದಲ ಹುಮ್ಮಸ್ಸು ಅಲ್ಲಿಲ್ಲ
ಬಾಡಿ ಹೋದ ಮುಖ ಸೋತು ಸೊರಗಿದ ದೇಹ
ಗುರಿ ಮುಟ್ಟುವ ತವಕವೇ ಅಲ್ಲುಳಿದಿಲ್ಲ
ಏನಾಯಿತೋ , ಹೇಗಾಯಿತೋ ...
***********
ಬೆಳಕು ಹರಿದಾಗ ನಾ ನಾ ನಾನಾಗಿರಲಿಲ್ಲ
ಇನ್ನಸ್ಟು ಸುಳ್ಳು ನನಗೆ ಬೇಕಿರಲಿಲ್ಲ
ನನ್ನೊಳಗಿನ ಕಪಟ ನನ್ನರಿವಿಗೆ ಬರಲಿಲ್ಲ
ಎಲ್ಲಿ ಹೋಗಲಿ ಯಾರ ಕೇಳಲಿ
*************
ಚೂರಾಗಿದೆ ಮನಸು
ನಾ ಪೋಣಿಸಿದ ಕನಸು
ಹರಡಿ ಬಿದ್ದಿದೆ ಹಾದಿಯಲಿ
ಆ ನನಸಾಗದ ಕನಸು ...
-- ಬೆಟ್ಟದ ಜೀವ(ಇದು ನನ್ನ ಮೊದಲ ಪ್ರಕಟಿತ ಕವನ.)

Thursday, November 13, 2008

ಯಾಕ್ಹೀಗೆ ?

ಇದು ನನ್ನ ಗೆಳೆಯ ಹೇಳಿದ ಕತೆ. ಆತ ಒಬ್ಬ ಹುಡುಗಿಯನ್ನು ತುಂಬ ಪ್ರೀತಿಸ್ತಿದ್ದ. ತನ್ನ ಜೀವಕ್ಕೆ ಮಿಗಿಲಾಗಿ ಪ್ರೀತಿಸ್ತಿದ್ದ ಅಂದ್ರೂ ಸರೀನೆ. ಅವಳೂ ಅಷ್ಟೆ. ಆದ್ರೆ ಒಂದು ದಿನ ಆಕೆಗೆ ಇದ್ದಕ್ಕಿದ್ದಂತೆ ಈತ ಬೋರ್ ಆಗಲು ತೊಡಗಿದ. ಹಣದ ಹಿಂದೆ ಬಿದ್ದ ಆಕೆ ಇನ್ನೊಬ್ಬನ ಜೊತೆ ಸುತ್ತಲು ಶುರು ಮಾಡಿದ್ಲು. ಇದು ಗೊತ್ತಾದಾಗ ಈತ ಖಿನ್ನನಾಗಿ ಬಿಟ್ಟ. ಜೀವನ ಇಡೀ ಶರಾಬು ಮುಖ ನೋಡದ ಈ ವ್ಯಕ್ತಿ ದಿನ ನಿತ್ಯ ಕುಡಿಯಲು ಶುರು ಮಾಡಿದ. ತನ್ನ ನೋವನ್ನು ತನ್ನಲ್ಲೇ ಅವಡುಗಚ್ಚಿ ನುಂಗುತ್ತಾ ದಿನ ದೂಕುತ್ತಿದ್ದ. ನೋವು, ಹತಾಶೆಯಲ್ಲಿ ಇಲ್ಲಿ ಈತ ದಿನನಿತ್ಯ ಸಾಯುತ್ತಿದ್ದರೆ, ಅಲ್ಲಿ ಅವಳು ಯಾರೋ ಇನ್ನೊಬ್ಬನ ಕೈಕೈ ಹಿಡಿದು ಸುತ್ತಾದುತ್ತಿದ್ದಳು. ಆದ್ರೆ ಈತ ತನ್ನ ನೋವನ್ನು ಯಾರ ಮುಂದೇನೂ ಹೇಳಿಕೊಳ್ತಿರಲಿಲ್ಲ. ಅವನಿಗೊಂಡೀ ಕೊರಗು. ಹೋದವಳು, ಹೋದಳು. ಆದ್ರೆ, ಕಾರಣವದ್ರು ಹೇಳಿ ಹೋಗಭುದಿತ್ತಲ ಅನ್ನೋದು. ಯಾಕೆ ಹೀಗೆ?ಯಾವುದೇ ಒಂದು ಸಂಬಂಧ ಅದು ಗೆಳೆತನವಾಗಿರಲಿ ಅಥವಾ ಪ್ರೀತಿಯೇ ಇರಲಿ, ಅದನ್ನು ಶುರು ಮಾಡುವಾಗ ನಮ್ಮ ಮುಂದೆ ಒಂದಿಷ್ಟು ಕಲ್ಪನೆಗಳಿರುತ್ತವೆ. ಅದರಲ್ಲಿ ನಮ್ಮ ಎಸ್ಟೋ ತ್ಯಾಗ, ಪ್ರೀತಿಯ ಕೊಂಡಿ ಬೆಸೆದು ಕೊಂಡಿರುತ್ತದೆ. ಒಂದು ವೇಳೆ ಅಂತ ಕೊಂಡಿ ಕಳಚಲೇ ಬೇಕಾದರೆ ಅದು ಬೆಸೆದುಕೊಂಡಿರುವ ಇನ್ನೊಬ್ಬನಿಗೂ ಸೂಕ್ತ ಕಾರಣ ಹೇಳೋದು ನ್ಯಾಯ. ಆದರೆ, ನಾವದನ್ನು ಮರೆತೇ ಬಿಡುತ್ತೇವೆ. ಅಷ್ಟಕ್ಕೂ, ಯಾವುದೇ ಸಂಬಂಧ ಕಾರಣವಿಲ್ಲದೆ ಹುಟ್ಟುವುದಿಲ್ವಲ್ಲ. ನಮ್ಮಲ್ಲಿ ಕೆಲವರಿಗೆ ಸಮಬ್ಧ ಬೆಳೆಸುವಾಗ ಇರೋ ಆಸಕ್ತಿ ಅದನ್ನು ಮುರಿಯುವಾಗ ಇರೋದಿಲ್ಲ ಯಾಕೆ ಅನ್ನೋದೇ ಪ್ರಶ್ನೆ. ಉತ್ತರ ಗೊತ್ತಿದ್ರೆ ಇಲ್ಲಿ ಹಂಚಿಕೊಳ್ಳಿ. ಜೊತೆಗೆ ನನ್ನೀ ಗೆಳೆಯನಿಗೆ ಒಂದಷ್ಟು ಹಿತವಚನವೂ ಇರಲಿ. -ನಿಮ್ಮವನು