Tuesday, January 27, 2009

ಇವರನ್ನು ಏನೆಂದು ಕರೆಯೋಣ...

ಮೊನ್ನೆ ಮೊನ್ನೆ ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ಒಬ್ಬ ನಾಗರಿಕನಾಗಿ ಸಮರ್ಥಿಸಲು ಸಾಧ್ಯವೇ? ನನ್ನ ಮಟ್ಟಿಗಂತೂ ಇಲ್ಲ. ವಿಷಯವನ್ನು ಮಾಧ್ಯಮ ವಿನಾಕಾರಣ ದೊಡ್ಡದು ಮಾಡಿದವು ಎನ್ನುವುದು ಕೆಲವರ ದೂರು. ದೇಶದಲ್ಲಿ ಸುದ್ದಿಯಾಗುವ ಸಾಕಷ್ಟು ವಿಷಯಗಳಿರುವಾಗ ಇದೇವಿಷಯವನ್ನು ಮಧ್ಯಮ ದೊಡ್ಡದು ಮಾಡಿದ್ದು ಯಾಕೆ ಅನ್ನುವುದು ಅವರ ಪ್ರಶ್ನೆ . ಆದರೆ, ಭ್ರಷ್ಟಚಾರ ಕೂಡ ದೇಶವನ್ನು ಕಿತ್ತು ತಿನ್ನುತ್ತಿದೆ ಇವರಿಗ್ಯಾಕೆ ಅದರ ವಿರುದ್ಧ ಹೊರಡಬೇಕು ಅನ್ನುವುದಿಲ್ಲ?ಪಬ್ ಸಂಸ್ಕೃತಿ ನಮ್ಮದಲ್ಲ ನಿಜ. ಆದರೆ, ಹೆಣ್ಣು ಮಕ್ಕಳ ಮೇಲೆ ಕೈ ಮಾಡುವುದು ನಮ್ಮ ಸಂಸ್ಕೃತಿ ಎಂದು ಯಾವುದೇ ಪುಸ್ತಕದಲ್ಲಿ ಹೇಳಿಲ್ಲವಲ್ಲ. ಅಷ್ಟಕ್ಕೂ ಪೋಲೀಸು, ಕಾನೂನು ಇರುವಾಗ ಜನರೇ ಅದನ್ನು ಕೈಗೆತ್ತಿಕೊಂಡರೆ ಅದರ ಅಗತ್ಯವಾದರೂ ಯಾಕೆ. ಎಲ್ಲರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿದರೆ ದೇಶದ ಪರಿಸ್ಥಿತಿ ಏನಾದೀತು? ಎ ಬಗ್ಗೆ ಅವರು ಯೋಚನೆ ಮಾಡಿದರೆ ಒಳಿತು.